ಪೋಸ್ಟ್‌ಗಳು

ಕನ್ನಡ ಜೈಮಿನಿ ಭಾರತ ಸಟೀಕಾ ಅನುವಾದ

ಕನ್ನಡ ಜೈಮಿನಿ ಭಾರತ ಸಟೀಕಾ ಅನುವಾದ. * ಪ್ರಸ್ತಾವನೆ * ಶ್ರೀಮದಖಂಡ ಭೂಮಂಡಲ ಮಂಡನಾಯಮಾನವಾಗಿರುವ ಕರ್ಣಾಟಕದೇಶ ಕಮಲಾಕರಕ್ಕೆ ಕಮಲದಂತಿರುವ ಶ್ರೀ ಮನ್ಮಹೀಶ್ವರ ಸಂಸ್ಥಾನದ ಸೀಮೆಯೊಳಗಣ ಬಾಣಾವಾರದ ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿ, ತನ್ನಯ ವಿದ್ಯಾವೈದುಷ್ಯದಿಂದ ಕನ್ನಡ ಕವಿಕುಲಲಲಾಮನೆಂದು ಲೋಕವಿಖ್ಯಾತಿಯಂ ಪಡೆದ ಲಕ್ಷ್ಮೀಶನೆಂಬ ಮಹಾಕವಿಯು ಕನ್ನಡಿಗರ ಸೌಭಾಗೋದಯದಂತೆಸೆವ ಜೈಮಿನಿ ಭಾರತಂ' ಎಂಬ ಒಂದು ಲೋಕೋತ್ತರವಾದ ಪದ್ಯ ಪ್ರಬಂಧ ವನ್ನು, ಈಗ್ಗೆ ಸುಮಾರು ೨೧೦ ವರ್ಷಗಳ ಹಿಂದೆ ರಚಿಸಿರುವಂತೆ ಕಾಸನಗಳೇ ಮುಂತಾದವುಗಳಿಂದ ತಿಳಿದು ಬರುತ್ತದೆ. ಈ ಸುಪ್ರಸಿದ್ಧ ಕಾವ್ಯದ ಗುಣಗಾಂಭೀರವೇ ಆ ಮಹಾಕವಿಯ ಮತ್ತು ಆ ಮಹಾಕಾವ್ಯದ ಮಹಿಮೆಗೆ ಕನ್ನಡಿಯಾ ಪದ ಲಾಲಿತ್ಯ, ಅರ್ಥಗಾಂಭೀರ್, ಮಾಧುರ, ಶೈಲಿ, ಸರಸತೆ, ಸಾರಸ್ಯ, ಅರ್ಥ ಚಮತ್ತಿ, ಭಾವವೈಚಿತ್ಯ), ಅಲ೦ಕ ವೈಖರಿ, ಗುಣಪರಿಪಾಟ, ಭಾವೋದಯಕ್ಕಿಕೆ, ಕಾವ್ಯತೆ ಮುಂತಾದವುಗಳನ್ನು ಎಷ್ಟು ಕೊಂಡಾಡಿದರೂ ಸಾಲದು, ಕನ್ನಡ ಕಾವ್ಯಾಂ ಮೃತವನ್ನು ಪಾನಮಾಡಬೇಕೆಂದು ಬಯಸುವ ಕನ್ನಡಿಗರಿಗೆ ಇಂತಹ ಅಮೃತನಿಧಿಯು ಮತ್ತೊಂದಿಲ್ಲ. ಪಟ್ಟಣ, ಗ್ರಾಮ, ಊರು, ಹಳ್ಳಿ ಮೊದಲಾದವುಗಳಲ್ಲಿಯೂ ಈ ಪ್ರಬಂಧವನ್ನು ಓದಿ, ಕೇಳಿ ಆನಂದಿಸದವರೇ ಇಲ್ಲ. ಈ ಸು೦ದರಕಾವ್ಯದ ಸವಿಯು ಭಾಷಾಜ್ಞಾನವನ್ನು ಹೆಚ್ಚಾಗಿ ಪಡೆಯುವವರಿಗೆ ಬಹುತರವಾದ ಸಹಾಯವಾಗಿದೆ. ಇದಲ್ಲದೆ ಸರ್ವಜ್ಞನು, ಸರ್ವ ಶಕ್ತನು, ಕರುಣಾಸಮುದ್ರನೂ ಆಗಿರುವ ಭಗವಂತನ ಮತ್ತು ಭಾಗವತ

ಅಮೆರಿಕಾ ಸಂಸ್ಕೃತಿಯ ಐತಿಹಾಸಿಕ ರೂಪರೇಖೆ - ಆಲ್ಪರ್ಟ್‌ ಹಾರ್ಕ್‌ ನೆಸ್‌, ಅನುವಾದ : ಎಂ ಯಾಮುನಾಚಾರ್ಯ

 ಅಮೆರಿಕಾ ಸಂಸ್ಕೃತಿಯ ಐತಿಹಾಸಿಕ ರೂಪರೇಖೆ -  ಲೇಖಕ : ಆಲ್ಪರ್ಟ್‌ ಹಾರ್ಕ್‌ ನೆಸ್‌  ಅನುವಾದ : ಎಂ ಯಾಮುನಾಚಾರ್ಯ

ಭಾರತೀಯ ಸಂಸ್ಕೃತಿ - ಡಾ|| ಎಸ್‌ ಶ್ರೀಕಂಠಶಾಸ್ತ್ರೀ

 ಭಾರತೀಯ ಸಂಸ್ಕೃತಿ - ಡಾ|| ಎಸ್‌ ಶ್ರೀಕಂಠಶಾಸ್ತ್ರೀ ಮುನ್ನುಡಿ - ಕೆ.ವಿ ಪುಟ್ಟಪ್ಪ ಮಾನವನ ಊರ್ಧ್ವಗಮನದ ಸಾಹಸ ದ್ವಿಮುಖಿಯಾದುದ್ದು; ನಾಗರೀಕತೆ ಮತ್ತು ಸಂಸ್ಕೃತಿ. ಒಂದು ಬಹಿರ್ಮುಖ, ಮತ್ತೊಂದು ಅಂತರ್ಮುಖ, ಆದರೆ ಅವುಗಳಿಗೆ ಪರಸ್ಪರ ವಿನಾಭಾವವೇನು ಇಲ್ಲ. ಒಂದರ ಪ್ರಭಾವಕ್ಕೆ ಮತ್ತೊಂದನ್ನು ರೂಪಿಸುವ ಶಕ್ತಿಯಿರುತ್ತದೆ. ಮಾನವ ಕುಲದ ಈ ಸಾಹಸವೇ ಋಷಿ, ಕವಿ, ಶಿಲ್ಪಿ, ಯೋಗಿ, ಪ್ರವಾದಿ, ಮಹಾತ್ಮಾ, ಆಚಾರ್ಯ, ಪರಮಹಂಸಾದಿ ವಿಭೂತಿ ಪುರುಷರನ್ನು ನಿರ್ಮಿಸಿದೆ. ಅಸಂಖ್ಯ ಮನಸ್ಸುಗಳ ಸಮಷ್ಟಿಯಲ್ಲಿ ಸಂಭವಿಸಿ, ಪ್ರಕಟವಾಗಿ, ಸಿದ್ಧವಾಗುವ ಒಂದು ದೇಶದ ಸಮಷ್ಟಿಮನಸ್ಸಿನ ಚಿತ್‌ ಶಕ್ತಿಯ ರಸಗಂಗೆಯೇ ಆ ದೇಶದ ಸಂಸ್ಕೃತಿ. ಸಂಸ್ಕೃತಿ ಎಂಬ ಪದದ ಅರ್ಥವ್ಯಾಪ್ತಿ, ವಿಸ್ತಾರವಾದುದು. ಒಂದು ಮಾತಿನಲ್ಲಿಯೋ ಒಂದು ವಾಕ್ಯದಲ್ಲಿಯೋ ಅದರ ದಿಗ್ದರ್ಶನ ವಾಡುವುದು ಕಷ್ಟ. ಆದರೂ ಮನುಷ್ಯ ಚೇತನದ ಸರ್ವತೋಮುಖವೂ ವಿಕಾಸಮಾನವೂ ಆದ ಅತ್ಮಶ್ರೀಯನ್ನು ಸಂಸ್ಕೃತಿ ಎಂದು ಸಂಕೇತಿಸಬಹುದು.