ಕನ್ನಡ ಜೈಮಿನಿ ಭಾರತ ಸಟೀಕಾ ಅನುವಾದ

ಕನ್ನಡ ಜೈಮಿನಿ ಭಾರತ ಸಟೀಕಾ ಅನುವಾದ.


*ಪ್ರಸ್ತಾವನೆ*

ಶ್ರೀಮದಖಂಡ ಭೂಮಂಡಲ ಮಂಡನಾಯಮಾನವಾಗಿರುವ ಕರ್ಣಾಟಕದೇಶ ಕಮಲಾಕರಕ್ಕೆ ಕಮಲದಂತಿರುವ ಶ್ರೀ ಮನ್ಮಹೀಶ್ವರ ಸಂಸ್ಥಾನದ ಸೀಮೆಯೊಳಗಣ ಬಾಣಾವಾರದ ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿ, ತನ್ನಯ ವಿದ್ಯಾವೈದುಷ್ಯದಿಂದ ಕನ್ನಡ ಕವಿಕುಲಲಲಾಮನೆಂದು ಲೋಕವಿಖ್ಯಾತಿಯಂ ಪಡೆದ ಲಕ್ಷ್ಮೀಶನೆಂಬ ಮಹಾಕವಿಯು ಕನ್ನಡಿಗರ ಸೌಭಾಗೋದಯದಂತೆಸೆವ ಜೈಮಿನಿ ಭಾರತಂ' ಎಂಬ ಒಂದು ಲೋಕೋತ್ತರವಾದ ಪದ್ಯ ಪ್ರಬಂಧ ವನ್ನು, ಈಗ್ಗೆ ಸುಮಾರು ೨೧೦ ವರ್ಷಗಳ ಹಿಂದೆ ರಚಿಸಿರುವಂತೆ ಕಾಸನಗಳೇ ಮುಂತಾದವುಗಳಿಂದ ತಿಳಿದು ಬರುತ್ತದೆ. ಈ ಸುಪ್ರಸಿದ್ಧ ಕಾವ್ಯದ ಗುಣಗಾಂಭೀರವೇ ಆ ಮಹಾಕವಿಯ ಮತ್ತು ಆ ಮಹಾಕಾವ್ಯದ ಮಹಿಮೆಗೆ ಕನ್ನಡಿಯಾ ಪದ ಲಾಲಿತ್ಯ, ಅರ್ಥಗಾಂಭೀರ್, ಮಾಧುರ, ಶೈಲಿ, ಸರಸತೆ, ಸಾರಸ್ಯ, ಅರ್ಥ ಚಮತ್ತಿ, ಭಾವವೈಚಿತ್ಯ), ಅಲ೦ಕ ವೈಖರಿ, ಗುಣಪರಿಪಾಟ, ಭಾವೋದಯಕ್ಕಿಕೆ, ಕಾವ್ಯತೆ ಮುಂತಾದವುಗಳನ್ನು ಎಷ್ಟು ಕೊಂಡಾಡಿದರೂ ಸಾಲದು, ಕನ್ನಡ ಕಾವ್ಯಾಂ ಮೃತವನ್ನು ಪಾನಮಾಡಬೇಕೆಂದು ಬಯಸುವ ಕನ್ನಡಿಗರಿಗೆ ಇಂತಹ ಅಮೃತನಿಧಿಯು ಮತ್ತೊಂದಿಲ್ಲ. ಪಟ್ಟಣ, ಗ್ರಾಮ, ಊರು, ಹಳ್ಳಿ ಮೊದಲಾದವುಗಳಲ್ಲಿಯೂ ಈ ಪ್ರಬಂಧವನ್ನು ಓದಿ, ಕೇಳಿ ಆನಂದಿಸದವರೇ ಇಲ್ಲ. ಈ ಸು೦ದರಕಾವ್ಯದ ಸವಿಯು ಭಾಷಾಜ್ಞಾನವನ್ನು ಹೆಚ್ಚಾಗಿ ಪಡೆಯುವವರಿಗೆ ಬಹುತರವಾದ ಸಹಾಯವಾಗಿದೆ. ಇದಲ್ಲದೆ ಸರ್ವಜ್ಞನು, ಸರ್ವ ಶಕ್ತನು, ಕರುಣಾಸಮುದ್ರನೂ ಆಗಿರುವ ಭಗವಂತನ ಮತ್ತು ಭಾಗವತ ಶಿರೋಮಣಿಗಳ ವಿಚಿತ್ರವಾಗಿಯೂ, ಕರ್ಣಾನಂದ ಕರವಾಗಿಯೂ, ಭಕ್ತಿರಸಭರಿತವಾಗಿಯೂ ಇರುವ ಕಥಾಸಂದರ್ಭದಿಂದ ಗುಂಫಿತವಾಗಿದೆ. ಇಂತಹ ಸೈಂಧವನ್ನು ವಿದ್ಯಾ ರ್ಥಿಗಳಿಗೂ, ಸಾಧಾರಣ ಜನರಿಗೂ ವಿಶದಪಡಿಸಿ ತಿಳಿಯಪಡಿಸಬೇಕೆಂಬ ಉದ್ದೇಶದಿಂದ ಪ್ರತಿಪ ಟೀಕಾ, ಕಥಾರೂಪವಾದ ತಾತ್ಪರ್ಯ, ಸಂಧಿಸಮಾಸಾದಿಗಳು, ಛಂದೋವಿವರಣ, ಶೇಷಾರ್ಥ, ಅಲಂಕಾರವಿಶೇಷಗಳು, ಇತ್ಯಾದಿಗಳನ್ನು ಸರಸವಾಗಿ ವಿಂಗಡಿಸಿ ಭಾನುಪ್ರಭೆ'' ಎಂಬ ಟೀಕೆಯನ್ನು ರಚಿಸಿ ಇದೆ, ಈ ರಚನಾ ಕಾರ್ಯಕ್ಕೆ ಮ|| ರಾ|| ಪಂಡಿತ ಶ್ರೀಕಂಠಯ್ಯ ನವರು, ಮ|| ರಾ|| ದೇ|| ಶಂಕರಭಟ್ಟಿರವರೇ ಪರಿಪೂರ್ಣ ಸಹಾಯಮಾಡಿದ್ದಾರೆ. ರಚನಾಕಗಳ ಭ್ರಮ ಪ್ರಮಾದಾದಿಗಳಿಂ ದಲೂ, ಮುದ್ರಣ ಕಾರ್ಯವಿಶೇಷದಿಂದಲೂ ಗ್ರಂಥದಲ್ಲಿ ತಪ್ಪೇ ಇಲ್ಲವೆಂದು ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ಲೋಕದಲ್ಲಿ ಕೇವಲ ಗುಣಮಯವೇ ಆಗಿ ದೋಷವಿಲ್ಲದೆಯೂ, ದೋಷಮಯವೇ ಆಗಿ ಗುಣವಿಲ್ಲದೆಯೂ ಇರುವ ಪದಾರ್ಥವೇ ಇಲ್ಲ. ಆದುದರಿ೦ದ ಗುಣೈಕ ಪಕ್ಷಪಾತಿಗಳೂ, ದಯಾದ್ರಹೃದಯರೂ ಆಗಿರುವ ಸತ್ಪುರುಷರು ಈ ವಿವರಣದಲ್ಲಿನ ಗುಣಾಂಶವನ್ನು ಮಾತ್ರ ಪರಿ ಗ್ರಹಿಸಿ ಸಂತೋಷಿಸುವರೆಂದು ಕೋರಿಕೆ. ಈ ವಿಷಯದಲ್ಲಿ ಕಂಠದೊಳಗೆ ವಿಷವನ್ನು ಅಡಗಿಸಿಕೊಂಡು ಶಿರಸ್ಸಿನಲ್ಲಿ ಚಂದ್ರ ನನ್ನು ಶೇಖರಿಸಿಕೊಂಡಿರುವ ನೀಲಕಂಠನಾದ ಶಶಿಖಂಡಮಂಡನನ್ನೂ, ಜಲಮಿಶ್ರವಾದ ಕ್ಷೀರದಲ್ಲಿ ಜಲಾಂಶವನ್ನು ಬಿಟ್ಟು ಕ್ಷೀರಾಂಶವನ್ನು ಪರಿಗ್ರಹಿಸುವ ರಾಜಹಂಸೆಗಳೂ ಉದಾಹರಣೆಯಾಗಿ ಕಂಗೊಳಿಸುತ್ತಿರುವಲ್ಲಿ ಸತ್ಪುರುಷರ ಸನ್ನಿಧಾನದೊಳಗೆ ವಿಶೇಷವಾಗಿ ವಿಜ್ಞಾಪಿಸಬೇಕಾದ ವಿಷಯವೇನಿರುವುದು ? ಎಲೈ ಪಾಠಕಮಹಾಶಯರುಗಳಿರಾ ! ಈ ಪ್ರಭೆಯು ತಮ್ಮ ಪಾಠಾವಸರದಲ್ಲಿ ಸ್ವಲ್ಪ ಮಟ್ಟಿಗಾದರೂ ಸಹಾಯಕಾರಿಯಾದರೆ ನಮ್ಮ ಶ್ರಮವು ಸಾರ್ಥಕವಾಗುವುದು.

ವಿವರಣಕರ್ತ.  


ಶುಭಮಸ್ತು,

ಜೈಮಿನಿ ಭಾರತದ ವಿಷಯಾನುಕ್ರಮಣಿಕೆ.

ಮಂಗಳ ಶ್ಲೋಕಗಳು

ಕಾವ್ಯವನ್ನು ಶ್ಲಾಘಿಸಿರುವುದು

ಕವಿಯ ನಾಮಸ್ತೋತ್ರವು

ಅಶ್ವಮೇಧ ಪಠ್ಯದ ಕಥಾರಂಭವು ಯುಧಿಷ್ಠಿರನ ಆಳ್ವಿಕೆಯ ವಿವರ

ಯುದ್ಧಿರನ ಬಳಿಗೆ ಬಾದರಾಯಣನು ಬಂದದ್ದು

ಬಾದರಾಯಣನು ಧರ್ಮಜನಿಗೆ ಅಶ್ವಮೇಧ ಯಾಗವನ್ನು ಮಾಡಲು ಬೋಧಿಸಿದ್ದು

ಕೃಷ್ಣಸ್ವಾಮಿಯು ಧರರಾಯನ ಬಳಿಗೆ ಬಂದದ್ದು

ಶ್ರೀಕೃಷ್ಣ ವಂಶಾವಳಿಯು

ವಾಯುಸುತ ಮುರಹರರ ವಾಗ್ವಾದವು

ಭೀಮನೂ ವೃಷಕೇತುವೂ ಮೇಘನಾದನೂ ಯಜ್ಞಾಶ್ವಕ್ಕಾಗಿ ಯೌವನಾಶ್ವನ ರಾಜಧಾನಿಯನ್ನು ಪ್ರವೇಶಿಸುವುದು 

ಯೌವನಾಶ್ವನ ರಾಜಧಾನಿಯನ್ನು ವರ್ಣಿಸಿರುವುದು

ಧರ್ಮಜನ ವಂಶ ವಿವರಣೆಯು

ಈ ಯೌವನಾಶ್ವನೊಂದಿಗೆ ಕಾದಿ ಜಯವಾದ ಬಳಿಕ ಭೀಮಾದಿಗಳು ಯೌವನಾಶ್ವನೊಡಗೂಡಿ ಯಜ್ಞಾಶ್ವದೊಂದಿಗೆ

ಹಸ್ತಿನಾವತಿಗೆ ಬ೦ದದ್ದು

ಶ್ರೀ ಕೃಷ್ಣ ಮೂರುತಿಯು ತನ್ನ ರಾಜಧಾನಿಯನ್ನು ಪ್ರವೇಶಮಾಡಿದ್ದು 

ಮರುತ್ತರಾಯನ ಕಥಾ ವಿವರವು 

ಬಾದರಾಯಣನು ಧರ್ಮಜನಿಗೆ ಧರ್ಮ ಸೂಕ್ಷ್ಮಗಳನ್ನು ಹೇಳುವುದು 

ಭೀಮನು ದ್ವಾರಕಾ ನಗರಕ್ಕೆ ಹೋದದ್ದು.

ಕೃಷ್ಣ ಸ್ವಾಮಿಯು ಸಕಲ ಯಾದವರಿಂದೊಡಗೂಡಿ ಗಜಪುರವನ್ನು ಸೇರಿದ್ದು

ಸಾಲ್ವಾ ನುಜನಿ೦ದ ಯಾಗದ ತುರಗವು ಮಾಯವಾದದ್ದು

ನೀಲಧ್ವಜ ಮಹಾರಾಯನ ರಾಜಧಾನಿಗೆ ಯಜ್ಞಾಶ್ವವು ಬಂದದ್ದು

ಯಕ್ಷೇಶ್ವರನಿಗೆ ನೀಲಧ್ವಜನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು 

ಗಂಗೆಯು ಧನ೦ಜಯನಿಗೆ ಕಾಪವನ್ನು ಕೊಟ್ಟಿದ್ದು F

ಚಂಡಿಯ ಕಾಪವಿಮೋಚನೆಯ ವಿವರ

ಯಜ್ಞಾಶ್ವವು ಚಂಪಕ ನಗರಿಯನ್ನು ಪ್ರವೇಶಮಾಡಿದ್ದು

ಕಾದ ಕೊಪ್ಪರಿಗೆಯಲ್ಲಿ ಹಾಕಲ್ಪಟ್ಟ ಸುಧನ್ವನು ಬದುಕುವುದು

ಸುಧನ್ವನ ಯುದ್ಧವು

ಶ್ರೀ ಕೃಷ್ಣನ ಸಾರಥ್ಯದಿಂದ ಸುಧನ್ವನನ್ನು ಪಾರ್ಥನು ಸಂಹರಿಸಿದ್ದು

ಸುಧನ್ವನ ಶಿರಸ್ಸನ್ನು ಪರಮೇಶ್ವರನು ತನ್ನ ರುಂಡಮಾಲೆಯೊಳಗೆ ಹಾಕಿಕೊಳ್ಳುವಿಕೆ 

ಸುರಥನ ಶಿರವು ಈಶ್ವರನ ರುಂಡಮಾಲೆಗೆ ಸೇರಿದ್ದು

ಯಜ್ಞಾಶ್ವವು ಹೆಣ್ಣು ಕುದುರೆಯಾಗಿ ಹೋದ ಕಥೆ ಪೂರ್ವರೂಪವಂ ತಾಳಿದ ಯಜ್ಞಾಶ್ವವು ಸ್ತ್ರೀ ರಾಜ್ಯವಂ ಪ್ರವೇಶಿಸಿದ್ದು

ಪ್ರಮಿಳೆಯನ್ನು ಪಾರ್ಥನು ಒಪ್ಪಿಸಿದ್ದು

ಭೀಷಣ ನಗರಕ್ಕೆ ಯಜ್ಞಾಶ್ವವು ಹೋಗಿ ಸೇರಿದ್ದು

ಪಾರ್ಥನು ರಕ್ಕಸರನ್ನೆಲ್ಲಾ ಪರಾಜಿತರನ್ನಾಗಿ ಮಾಡಿ ಅಶ್ವವನ್ನು ಬಿಡುಗಡೆ ಮಾಡಿದ್ದು 

ಕುದುರೆಯು ಮಣಿಪುರವಂ ಪ್ರವೇಶಿಸಿದ್ದು 

ಬಭ್ರುವಾಹನನು ಯಜ್ಞಾಶ್ವವನ್ನು ಕಟ್ಟಿದ ಕಥೆ ಕುಶಲವರಿಗಾದ ಯುದ್ಧದ ಕಥೆಯು

ವಾಲ್ಮೀಕಿ ಮುನಿಯು ಜಾನಕಿಯನ್ನು ತನ್ನೆಲೆಮನೆಯಲ್ಲಿ ಕಾಪಾಡುತ್ತಿದ್ದದ್ದು 

ಲವನು ಶ್ರೀರಾಮನ ಯಾಗದ ಕುದುರೆಯನ್ನು ಬಂಧಿಸಿದ್ದು

ಶ್ರೀರಾಮನು ಕುಶಲವರೊಂದಿಗೆ ಕಾಳಗಮಾಡಿ ಮೂರ್ಜಿತನಾದದ್ದು

ವಾಲ್ಮೀಕಿ ಮುನಿಯು ಶ್ರೀರಾಮನನ್ನು ಸಮಾಧಾನಮಾಡಿ ರಾಮನೊಂದಿಗೆ ಕುಶಲವರನ್ನೂ ಜಾನಕಿಯನ್ನೂ

ಕಳುಹಿಸಿ ಯಜ್ಞವನ್ನು ಪೂರ್ತಿಮಾಡಿದ್ದು ಅರ್ಜುನ ಬಭ್ರುವಾಹನರ ಕಾಳಗವು

ವೃಷಕೇತುವನ್ನು ಅರ್ಜುನಿಯು ಕೊಂದದ್ದು

ಬಭ್ರುವಾಹನನು ಪಾರ್ಥನ ತಲೆಯನ್ನು ಕತ್ತರಿಸಿದ್ದು

ಸಂಜೀವಿನೀ ಮಣಿ ಮತ್ತು ಕೃಷ್ಣಾನುಗ್ರಹದಿಂದ ಪಾರ್ಥನೂ ವೃಷಧ್ವಜನ ಮತ್ತೆ ಜೀವವನ್ನು ಪಡೆದದ್ದು 

ಶಿಖಕೇತುವು ಫಲುಗುಣನ, ಯಾಗದ ಕುದುರೆಯನ್ನು ಮಯೂರಧ್ವಜನಿಗೆ ಒಪ್ಪಿಸುವುದು

ಮಯೂರಧ್ವಜನ ಬಳಿಗೆ ನರನಾರಾಯಣರು ಹೋಗಿ ಸೇರಿದ್ದು

ಲ್ಲಿನ ಸ್ತ್ರೀಯರನ್ನು ವರ್ಣಿಸುವುದು

ಬ್ರಾಹ್ಮಣ ವೇಷಧಾರಿಯಾದ ಶ್ರೀ ಕೃಷ್ಣನು ಮಯೂರಧ್ವಜ ಮಹಾರಾಯನ ದೇಹಾರ್ಧವನ್ನು ಯಾಚಿಸಿದ್ದು

 ಮಯೂರಧ್ವಜನ ಸ್ಥಿರಚಿತ್ತದಿಂದ ಶ್ರೀ ಕೃಷ್ಣ ಮೂರುತಿಯು ನಿಜಸ್ವರೂಪವನ್ನು ತೋರಿದ್ದು

ವೀರವರ್ಮನ ಮಗಳನ್ನು ಯಮನಿಗೆ ಮದುವೆ ಮಾಡಿದ ಕಥೆಯು ಕೃಷ್ಣಾನುಗ್ರಹದಿಂದ ವೀರವರ್ಮನು ಸೌಮ್ಯಗುಣವನ್ನೈದಿದ್ದು

ದೇವಮುನಿಯು ಪಾರ್ಥನಿಗೆ ಇಂದುಹಾಸ ಕಥೆಯನ್ನು ವಿವರಿಸಿದ್ದು 

ಇ೦ದುಹಾಸನು ಕುದುರೆಗಳನ್ನು ಕೃಷ್ಣಾರ್ಜುನರಿಗೊಪ್ಪಿಸಿದ್ದು

ಇಂದುಹಾಸಾದಿಗಳಿಂದ ಕೂಡಿದ ಪಾರ್ಥನಿಗೆ ಬಕದಾಲ್ಯ ಮುನಿಯ ದರ್ಶನ ಲಾಭವಾದದ್ದು

ಅನೇಕ ಬ್ರಹ್ಮರ ಕಥೆಯನ್ನು ಬಕದಾಲ್ಯ ಮುನಿಯಿಂದ ಪಾರ್ಥನು ತಿಳಿದದ್ದು

ಶ್ರೀ ಕೃಷ್ಣ ಸ್ವಾಮಿಯನ್ನು ದುಕ್ಕಳೆಯು ಮರೆಹೊಗುವುದು

ಅರ್ಜುನನು ತಾನು ಗಳಿಸಿಕೊಂಡು ಹೋಗಿದ್ದ ಪದಾರ್ಥಗಳನ್ನೆಲ್ಲಾ ಧರ್ಮಜನಿಗೆ ಒಪ್ಪಿಸಿದ್ದು

ಧರ್ಮರಾಯನು ಯಥಾಶಾಸ್ತ್ರದಿಂದ ಗರುಡವೇದಿಕೆಯನ್ನು ನಿರ್ಮಿಸಿದ್ದು

ಧರ್ಮಜನು ಹಯಮೇಧವನ್ನು ಆರಂಭಿಸಿದ್ದು

ಕೃಷ್ಣಾನುಗ್ರಹದಿಂದ ಕುದುರೆಯ ದೇಹವು ಕರ್ಪೂರವಾದದ್ದು

ಯುಧಿಷ್ಠಿರನು ಅಶ್ವಮೇಧವನ್ನು ಪೂರೈಸಿದ್ದು

ಕೃಷ್ಣಾದಿಗಳೆಲ್ಲರೂ ಧರರಾಯನ ಮನ್ನಣೆಯಂ ಕೈಕೊಂಡು ತಮ್ಮ ತಮ್ಮ ನಗರಕ್ಕೆ ಹೋಗಿ ಸೇರಿದ್ದು

ಧರ್ಮರಾಯನ ರಾಜ್ಯಭಾರವು

 ಗ್ರಂಥೋಪಸಂಹಾರವು.

ಜೈಮಿನಿ ಭಾರತದ ವಿಷಯಾನುಕ್ರಮಣಿಕೆ ಸಂಪೂರ್ಣಮಾದುದು.




ಶ್ರೀ ಮಹಾ ಗಣಪತಯೇ ನಮಃ

ಟೀಕಾ ತಾತ್ಪರ್ಯ ಸಹಿತ ಜೈಮಿನಿಭಾರತವು.


ಮೊದಲನೆಯ ಸಂಧಿ


ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ| 

ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ | 

ತೀವ ಲಯದಮಲಸೌಭಾಗ್ಯ ರತ್ನಾಕರಂ ಪೆರ್ಚಿನಿಮ್ಮೆರೆವರಿಯೆ || 

 ಅವಗಂಸರಸಕರುಣಾಮೃತದ ಕಲೆಗಳಿಂ | 

ತೀವಿದೆಳೆನಗೆಯ ಬೆಳದಿಂಗಳಿಂ ಪಸರಿಸುವ |

ದೇವಪುರನಿಲಯ ಲಕ್ಷ್ಮೀರಮಣನಾಸ್ಯ ಚಂದಾನಂದಮೆಮಗೀಯಲಿ || ೧ ||


ಕಂದ|| 

ಎಂದಾರುಮನುಜ ಬೃಂದಕೆ | 

ಬೃಂದಾರಕ ತರುವೆನಿಪ್ಪನಾರಾಯಣನಂ || ಮಂದೇತರಮತಿಗಾಗಿಯೆ |

ಸ೦ದೇಹವತೊರೆದು ನಿಂದುವಂದಿಸುತಿರುವೆಂ || ೧ ||

ಸೋಮನ ಶಿರದೊಳ್ಳರಿಸಿಹ | 

ಸೋಮನ ಚರಣಾಬ್ಬವನ್ನ ನೆನೆ ಯುತೆ ಮನದೊಳ್ || ಮಾನಕಮತಿಯನುರೂಪದಿ | 

ಜೈಮಿನಿಯಾಭಾರತಕ್ಕೆ ಟೀಕೆಯಗೈವಂ ||೨||


ನಾರಾಯಣನಂ ನೆನೆಯುತೆ ನಾರಾಯಣಶರ್ಮನೀಗ ರಚಿಸಿಹ ಕೃತಿಯೋಳ್ |

ಕಾರುಣ್ಯಾನ್ನ ತನಿಧಿಗಳ್ | 

ಸಾರಾಂಕಾದಾನದಿಂದ ತೋಷಿಕೆವಿಬುಧ‌ರ್ ||೩||

ಅವತಾರಿಕೆ- ಸ್ವಸ್ತಿ ಶ್ರೀಮತ್ಸಮಸ್ತ ಭೂಮಂಡಲಮಂಡನಾಯಮಾನವಾಗಿ, ಸಕಲ ಕಲ್ಯಾಣಗುಣಗಳಿಗೆ ನೆಲೆಯೆನಿಸಿ, ನಿಖಿಲ ಸಂಪದಂಗಳಿಗೆ ತೌರೂರಾದ ಕರ್ಣಾಟಕ ಜನಪದದೊಳು ಪ್ರಖ್ಯಾತಿಯನ್ನು ಪಡೆದಿರುವ ಮಹಾಕವಿಗೆ ಳೊಳಗೋರ್ವನಾದ ಶ್ರೀಯುತ ಲಕ್ಷ್ಮೀಶನೆಂಬ ಕವಿಯು, ಜೈಮಿನಿ ಮಹಾಮುನಿಯ ಕೃತಿಯಾಗಿರುವ ಅಶ್ವಮೇಧ ಪರ್ವದ ಕಥೆ ಯನ್ನು ಕನ್ನಡಿಗರ ಮೇಲ್ಮಗಾಗಿ ಕರ್ಣಾಟಕ ಭಾಷೆಯೊಳು ವಾರ್ಧಿಕ ಷಟ್ನದಿಯ ಪದ್ಯರೂಪವಾಗಿ, ಮೃದುಮಧುರಪದ ಶೈಲಿಯಿಂದ ರಚಿಸಬೇಕೆಂದು ನೆನೆದು, ತಾನು ಕೈ ಕೊಂಬ ಕೃತಿಯು ಅಂತರಾಯವಿಲ್ಲದೆ ನೆರವೇರಲೋಸುಗವೂ, ಮುಂದಿನ ಕಾವ್ಯಕರ್ತರಿಗೆ ಸತ್ಸಂಪ್ರದಾಯಶಿಕ್ಷೆಗಾಗಿಯೂ, ಆಶೀರ್ವಾದ, ನಮಸ್ಕಾರ, ವಸ್ತು ನಿರ್ದೇಶಗಳೆಂಬ ಮಂಗಳಗಳೊಳ ಗೊಂದಾದ ಆಶೀರ್ವಾದ ರೂಪವಾಗಿರುವ ಮಂಗಳವನ್ನು “ಶ್ರೀವಧುವಿನಂಬಕ" ಎಂಬ ಪದ್ಯರೂಪದಿಂದ ರಚಿಸುತ್ತಲಿದ್ದಾನೆ.


ಟೀಕು- ಶ್ರೀ-ವಿಷ್ಣುವಿನ ಪ್ರಾಣಕಾಂತೆಯಾದ ಲಕ್ಷ್ಮೀದೇವಿಯೆಂಬ, ವಧುವಿನ ಸ್ತ್ರೀಯ, ಅಂಬಕ ನೇತ್ರ ವೆಂಬ, ಚಕೋರಕಂ – ಚಕೋರವೆಂಬಹಕ್ಕಿಯು, ಪೊರೆಯೆ - ಕಾಪಾಡಲ್ಪಡಲು, ಭಕ್ತ - ಭಕ್ತಿಯನ್ನುಳ್ಳವರ, ಆವಳಿಯ ಗುಂಪಿನ, ಹೃತ್ – ಎದೆಯೆಂಬ, ಕುಮುದ - ಕರೀಕಮಲದಹೂವಿನ, ಕೋರಕಂ - ಮೊಗ್ಗು, ಬಿರಿಯೆ - ವಿಕಾಸವನ್ನೆದಲು, ಜಗತಿ-ಪ್ರಪಂಚದ, ವಲಯದ ಸುತ್ತುಗಟ್ಟಿನ, ಅಮಲ ಪರಿಶುದ್ಧವಾದ (ಕಶಲರಹಿತವಾದ) ಸೌಭಾಗ್ಯ-ವಿಶ್ವರ್ಯವೆನ್ನುವ, ರತ್ನಾಕರಂ-ಕಡಲು, ಪೆರ್ಚಿನಿಂ ಅಧಿಕವಾಗುವಿಕೆಯಿಂದ, ಮೇರೆವರಿಯ ದಡವನ್ನು ಮಾರಿಬರಲು, ಅವಗ-ಸದಾಕಾಲದ ಲ್ಲಿಯೂ, ಸರಸ-ಶೃಂಗಾರರಸವೇ ಆದಿಯಾದ ನವರಸಗಳಿಂದ (ಪ್ರೀತಿಯಿಂದೊಡಗೂಡಿದ), ಕರುಣಾ-ಕರುಣೆಯೆಂಬ, ಅಮೃ ತ-ಅಮೃತಮಯವಾದ, ಕಲೆಗಳಿಂ ಷೋಡಶಕಳೆಗಳಿಂದ (ತೇಜಸ್ಸು ಗಳಿಂದ) ತೀವಿ ವ್ಯಾಪ್ತನಾದ, ಎಳೆನಗೆ...ಹುಸಿ ನಗೆಯೆಂಬ, ಬೆಳದಿಂಗಳಿ-ಬೆಳದಿಂಗಳಿನಿಂದ ಚಂದ್ರಕಿರಣಂಗಳಿಂದ) ಪಸರಿಸುವ(ಕಾಂತಿಯನ್ನು ಹೊಂದಿರುವ), ಹರಡಿ ಕೊಂಡಿರುವ, ದೇವಪುರಿನಿಲಯ - ದೇವಪುರವೆಂಬ ಹಳ್ಳಿಯನ್ನು ನಿವಾಸಸ್ಥಾನವಾಗಿ ಮಾಡಿಕೊಂಡಿರತಕ್ಕ ಲಕ್ಷ್ಮಿ - ಲಕ್ಷ್ಮ ದೇವಿಗೆ, ರಮಣನ - ಗಂಡನಾದ ವಿಷ್ಣುವಿನ, ಆಸ್ಯ ವದನವೆಂಬ, ಚಂದ್ರ-ಇಂದುವು, ನಮಗೆ-ನಮ್ಮಗಳಿಗೆ, ಆನಂದಂ ಸಂತೋಷವನ್ನು, ಈಯಲಿ - ದಯಪಾಲಿಸಲಿ, (ಈ ಅರ್ಥವು ಎಷ್ಟು ಪರವಾದದ್ದು).


ಶ್ರೀ-ಕಾರದೆಯೆಂಬ, ವಧುವಿನ - ಹೆಂಗಸಿನ, ಅಂಬಕ ನೇತ್ರವೆಂಬ, ಚಕೋರಕ - ಚಕೋರವೆಂಬ ಹಕ್ಕಿಯು,

ಪೊರೆಯೆ ಸಲಹಲ್ಪಡಲು, ಭಕ್ತ-ಬ್ರಹ್ಮನನ್ನೇ ಸದಾಧ್ಯಾನ ಮಾಡುತ್ತಿರುವ ಸನಕಸನಂದನರೆಯೆ ಮೊದಲಾದವರ, ಅವಳಿಯ ಗುಂಪಿನ, ಹೃತ್-ಎದೆಯೆನ್ನುವ, ಕುಮುದ- ಕನ್ನೆದೆಲೆಯ, ಕೋರಕಂ - ಮೊಗ್ಗು, ಬಿರಿಯೆ - ವಿಕಸಿತವಾಗಲು, ಜಗತೀ ಭೂಮಿಯ, ವಲಯದ-ಮಂಡಲದ, (ಬ್ರಹ್ಮನಿಂದ ಉತ್ಪನ್ನವಾದ ಇಳಾಮಂಡಲದ) ಅಮಲ - ಪರಿಶುದ್ಧವಾದ, ಸೌಭಾಗ್ಯಸಂಪನ್ನ ತಕ್ಕ, ರತ್ನಾಕರಂ-ಅಬ್ಬಿಯು, ಪೇರ್ಚಿನಿಂ-ಆದಿಕ್ಯದಿಂದ ಮೇರೆವರಿಯೆ ಮಿತಿಮೀರಿ ಬರುತ್ತಿರಲಾಗಿ, ಆವಗ-ಸರ್ವಕಾಲದಲ್ಲಿಯೂ, ಸರಸ-ಪ್ರೀತಿಯುಕ್ತವಾದ (ತನ್ನ ಭಕ್ತರಲ್ಲಿ) ಕರುಣಾ-ಕರುಣೆಯಿಂದೊಡಗೂಡಿದ, ಅಮೃತದ ಕಲೆಗಳಿಂ


ಅಮೃತ ವಿಶಿಷ್ಟವಾದ ತೇಜಸ್ಸುಗಳಿಂದ, ತೀವಿದ ಪೂರಿತವಾದ, ಎಳೆನಗೆಯ - ಅರೆನಗೆಯೆಂಬ, ಬೆಳದಿಂಗಳಿ೦ – ಬೆಳದಿಂಗಳಿನಿಂದ, ಪಸರಿಸುವ ಕಾಂತಿಯನ್ನೀಯುವ, ದೇವಪುರ-ಸುರಾವಾಸವಾದ ಸತ್ಯಲೋಕವೆ, ನಿಲವಾಸಸ್ಥಾನವಾಗಿ ಉಳ್ಳ,

ಲಕ್ಷ್ಮೀರಮಣನ ಸರಸ್ವತೀ ಪ್ರಿಯನಾದ ಕಮಲಾಸನನ, ಆಸ್ಯ-ಮೋರೆಯೆಂಬ, ಚಂದ್ರ-ಇಂದುವು, ಆನಂದಂ ಸಂತೋಷ


ತಾತ್ಪರ್ಯ- (೧) ವಿಷ್ಣು ಪತ್ನಿಯಾದ ಲಕ್ಷ್ಮೀದೇವಿಯ ಕಣ್ಣುಗಳೆಂಬ ಚಕೋರಂಗಳನ್ನು ಸಲಹುವ, ಭಗವ ದೃಕ್ತರಾದವರ ಮುಕುಳಿತವಾದ ಹೃದಯವೆಂಬ ಕುಮುದ ಪುಷ್ಪವನ್ನು ವಿಕಾಸಪಡಿಸುವ, ಪ್ರಪಂಚದ ಐಶ್ವರವೆಂಬ ಅಬ್ಬಿಯು ಮೇರೆಯನ್ನತಿಕ್ರಮಿಸಿ ಬರುವಂತೆ ಮಾಡುವ, ಅನವರತವೂ ಶೃಂಗಾರರಸವೇ ಮೊದಲಾದ ನವರಸಂಗಳಿಂದ ಭರಿತ ವಾಗಿರುವ, ಕೃಪಾಸಮುದ್ರನಾದ, ಸುಧಾವಿಶಿಷ್ಟವಾದ ಕಳೆಯಿಂದೊಡಗೂಡಿರುವ, ಯಾವಾಗಲೂ ಹಸನ್ಮುಖಿಯಾಗಿರುವ, ದೇವತೆಗಳ ಪಟ್ಟಣದಲ್ಲಿ ವಾಸಿಸುವಂಥ, ಶ್ರೀಮನ್ನಾರಾಯಣ ಮೂರ್ತಿಯ ಮುಖವೆಂಬ ಶಕಾಂಕನು ಸಂತೋಷ ಸಮೃದ್ಧಿ ಯನ್ನು ದಯಪಾಲಿಸಿ (ಬ್ರಹ್ಮಾನಂದವನ್ನಿತ್ತು) ನಮ್ಮನ್ನು ಕಾಪಾಡಲಿ ಎಂದು ಭಾವವು.

ಕಾಮೆಂಟ್‌ಗಳು