ಭಾರತೀಯ ಸಂಸ್ಕೃತಿ - ಡಾ|| ಎಸ್‌ ಶ್ರೀಕಂಠಶಾಸ್ತ್ರೀ


 ಭಾರತೀಯ ಸಂಸ್ಕೃತಿ - ಡಾ|| ಎಸ್‌ ಶ್ರೀಕಂಠಶಾಸ್ತ್ರೀ


ಮುನ್ನುಡಿ - ಕೆ.ವಿ ಪುಟ್ಟಪ್ಪ

ಮಾನವನ ಊರ್ಧ್ವಗಮನದ ಸಾಹಸ ದ್ವಿಮುಖಿಯಾದುದ್ದು; ನಾಗರೀಕತೆ ಮತ್ತು ಸಂಸ್ಕೃತಿ. ಒಂದು ಬಹಿರ್ಮುಖ, ಮತ್ತೊಂದು ಅಂತರ್ಮುಖ, ಆದರೆ ಅವುಗಳಿಗೆ ಪರಸ್ಪರ ವಿನಾಭಾವವೇನು ಇಲ್ಲ. ಒಂದರ ಪ್ರಭಾವಕ್ಕೆ ಮತ್ತೊಂದನ್ನು ರೂಪಿಸುವ ಶಕ್ತಿಯಿರುತ್ತದೆ. ಮಾನವ ಕುಲದ ಈ ಸಾಹಸವೇ ಋಷಿ, ಕವಿ, ಶಿಲ್ಪಿ, ಯೋಗಿ, ಪ್ರವಾದಿ, ಮಹಾತ್ಮಾ, ಆಚಾರ್ಯ, ಪರಮಹಂಸಾದಿ ವಿಭೂತಿ ಪುರುಷರನ್ನು ನಿರ್ಮಿಸಿದೆ. ಅಸಂಖ್ಯ ಮನಸ್ಸುಗಳ ಸಮಷ್ಟಿಯಲ್ಲಿ ಸಂಭವಿಸಿ, ಪ್ರಕಟವಾಗಿ, ಸಿದ್ಧವಾಗುವ ಒಂದು ದೇಶದ ಸಮಷ್ಟಿಮನಸ್ಸಿನ ಚಿತ್‌ ಶಕ್ತಿಯ ರಸಗಂಗೆಯೇ ಆ ದೇಶದ ಸಂಸ್ಕೃತಿ. ಸಂಸ್ಕೃತಿ ಎಂಬ ಪದದ ಅರ್ಥವ್ಯಾಪ್ತಿ, ವಿಸ್ತಾರವಾದುದು. ಒಂದು ಮಾತಿನಲ್ಲಿಯೋ ಒಂದು ವಾಕ್ಯದಲ್ಲಿಯೋ ಅದರ ದಿಗ್ದರ್ಶನ ವಾಡುವುದು ಕಷ್ಟ. ಆದರೂ ಮನುಷ್ಯ ಚೇತನದ ಸರ್ವತೋಮುಖವೂ ವಿಕಾಸಮಾನವೂ ಆದ ಅತ್ಮಶ್ರೀಯನ್ನು ಸಂಸ್ಕೃತಿ ಎಂದು ಸಂಕೇತಿಸಬಹುದು. 









































































ಕಾಮೆಂಟ್‌ಗಳು